ಆಕಾಶದಲ್ಲಿ ಹಕ್ಕಿಗಳ ವೈಮಾನಿಕ ನೃತ್ಯ -ಮರ್ಮರೇಷನ್
ಮರ್ಮರೇಷನ್ ಅನ್ನು ಸ್ಟಾರ್ಲಿಂಗ್ ಎಂಬ ಒಂದು ಹಕ್ಕಿಗಳ ಗುಂಪು ಆಕಾಶದಾದ್ಯಂತ ಹಾರುತ್ತ ನರ್ತಿಸುತ್ತ ಉಂಟುಮಾಡುತ್ತವೆ. ಸಂಜೆಯ ಹೊತ್ತಿಗೆ, ಸುಂದರ ಪ್ರದೇಶದಲ್ಲಿ ಸ್ಟಾರ್ಲಿಂಗ್ಗಳ ಸಣ್ಣ ಗುಂಪುಗಳು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತ ಗುಂಪಿನಲ್ಲಿ ತಮ್ಮ ಮೈಮರೆಯುತ್ತವೆ. ಈ ಗುಂಪು ದೊಡ್ಡದಾಗಿ, ವೈಮಾನಿಕ ನೃತ್ಯದಲ್ಲಿ ಒಗ್ಗಟ್ಟಾಗಿ ಚಲಿಸುತ್ತಾ ಸೂರ್ಯನ ಬೆಳಕಿನ ವಿರುದ್ಧ ಭವ್ಯ ರೂಪರೇಖೆಗಳನ್ನು ಉಂಟುಮಾಡುತ್ತವೆ. ಸ್ಟಾರ್ಲಿಂಗ್ಗಳನ್ನು ‘ಭಾಗಶಃ ವಲಸೆಗಾರರು’ ಎಂದು ಕರೆಯಲಾಗುತ್ತದೆ. ಇವು ಕೇವಲ ಕೆಲವು ಸ್ಥಳಗಳಿಗೆ ಮಾತ್ರ ಚಲಿಸುತ್ತವೆ. ಮರ್ಮರೇಷನ್ ಹೆಚ್ಚಿನ ಸಂಖ್ಯೆಯ ಪಕ್ಷಿಗಳಿಗೆ ಆಕರ್ಷಿತವಾಗಿದೆ ಮತ್ತು ಪೆರೆಗ್ರಿನ್